ಭೌಗೋಳಿಕವಾಗಿ ಭಾರತ ಉಪಖಂಡ ಪ್ರದೇಶ ಮೂಲದ ಆಧಾರದ ಮೇಲೆ ಭಾರತದಲ್ಲಿ ಇಂದು ಸುಮಾರು ೩೦-೩೫ ಶುದ್ಧ ಗೋತಳಿಗಳನ್ನು ಗುರುತಿಸಲಾಗಿದೆ. ಭಾರತೀಯ ಗೋತಳಿಗಳಲ್ಲಿ ಬಹಳಷ್ಟು ತಳಿಗಳ ಹೆಸರು ಬಂದಿದ್ದು ತಳಿಗಳು ಅಭಿವೃದ್ಧಿಗೊಂಡ ಪ್ರದೇಶದ ಹೆಸರಿನಿಂದ. ಒಂದೇ ಪ್ರದೇಶದಲ್ಲಿ ಹೆಚ್ಚು ತಳಿಗಳು ಅಭಿವೃದ್ಧಿಗೊಂಡಿರುವ ಸಂದರ್ಭದಲ್ಲಿ ಅವುಗಳಿಗೆ ವಿಶೇಷಣವೊಂದು ಒದಗಿ ಬಂದಿರುವುದೂ ಇದೆ. ಉದಾ., ಮಲೆನಾಡು ಗಿಡ್ಡ. ಅಮೃತಮಹಲ್‌ನಂತೆ ತಳಿಯ ಹಿರಿಮೆಯನ್ನು ಕಂಡು ಅದನ್ನು ಪೋಷಿಸಿದವರು, ಅಭಿವೃದ್ದಿ ಪಡಿಸಿದವರು ವಿಶೇಷ ನಾಮಕರಣ ಮಾಡಿದ ಉದಾಹರಣೆಗಳು ಕೆಲವಿವೆ. ಕೆಂಪುಸಿಂಧಿ, ಥಾರ್ ಪಾರ್ಕರ್ ಸಹಿವಾಲ್, ಹರ್ಯಾಣಾ, ರಾಟಿ, ಗಿರ್, ಕಂಕ್ರೇಜ್ ಇವು ಉತ್ತರ ಭಾರತದ ಪ್ರಮುಖ ತಳಿಗಳಾದರೆ, ದೇವಣಿ, ಖಿಲ್ಲಾರಿ, ಒಂಗೋಲ್, ಕೃಷ್ಣಾತೀರಿ, ಅಮೃತಮಹಲ್, ಹಳ್ಳಿಕಾರ್, ವೆಚ್ಚೂರ್, ಅಂಬ್ಲಾಚೆರಿ, ಕಂಗಾಯಂ, ಅಲಂಬಾಡಿ ಇವು ದಕ್ಷಿಣ ಭಾರತದ ಪ್ರಸಿದ್ಧ ತಳಿಗಳು. ಭಾರತೀಯ ಗೋತಳಿಗಳು ಅವುಗಳ ಬಳಕೆ ಮತ್ತು ಗುಣಲಕ್ಷಣಗಳಿಗನುಸಾರವಾಗಿ ಹಾಲಿನ ತಳಿ, ಕೆಲಸಗಾರ ತಳಿ ಹಾಗೂ ಉಭಯೋದ್ದೇಶದ ತಳಿಗಳೆಂದು ಮೂರು ಭಾಗಗಳಾಗಿ ವಿಂಗಡಿಸಲ್ಪಟ್ಟಿವೆ. ಹಾಲಿನ ತಳಿಗಳು: ಈ ತಳಿಗಳಲ್ಲಿ ಹಸುಗಳು ಹೆಚ್ಚಿನ ಹಾಲನ್ನು ಕೊಡುತ್ತವೆ ಮತ್ತು ಗಂಡು ಹೋರಿಗಳು ಉತ್ತಮ ಕೆಲಸಗಾರ ಆಗಿರುವುದಿಲ್ಲ. ಸಾಹಿವಾಲ್, ಕೆಂಪು ಸಿಂಧಿ, ಗಿರ್, ದೇವನಿ ತಳಿಗಳು ಇದಕ್ಕೆ ಉದಾಹರಣೆಗಳು. ಈ ತಳಿಗಳ ಸರಾಸರಿ ಹಾಲಿನ ಉತ್ಪಾದನೆ ಪ್ರತಿ ಹಾಲಿನ ಚಕ್ರಕ್ಕೆ ೧೬೦೦ ಕೆ.ಜಿ. ಯಷ್ಟಿರುತ್ತದೆ. (1600 ) ಕೆಲಸಗಾರ ತಳಿಗಳು:ಗಂಡುತಳಿಗಳು ಒಳ್ಳೆಯ ಕೆಲಸಗಾರ ಆಗಿದ್ದು ಹಸುಗಳ ಹಾಲಿನ ಉತ್ಪಾದನೆ ಕಡಿಮೆ. ಪ್ರತಿ ಹಾಲಿನ ಚಕ್ರಕ್ಕೆ ಸರಾಸರಿ ೫೦೦ ಕೆ.ಜಿ.ಯಷ್ಟು ಮಾತ್ರ ಇರುತ್ತದೆ. ಸಾಮಾನ್ಯವಾಗಿ ಬಿಳಿಬಣ್ಣದ್ದಾಗಿರುತ್ತವೆ. ಒಂದು ಜೊತೆ ಎತ್ತುಗಳು ಒಂದು ಸಾವಿರ ಕೆ.ಜಿ.ಯಷ್ಟು ಭಾರವನ್ನು ಎಳೆಯಬಲ್ಲವು. ಸಾಧಾರಣ ಒಳ್ಳೆಯ ರಸ್ತೆಯಲ್ಲಿ ಗಾಡಿ ಎಳೆದುಕೊಂಡು ಗಂಟೆಗೆ ೫ರಿಂದ ೭ ಕಿ.ಮಿ ನಡೆದು ದಿನಕ್ಕೆ ೩೦-೪೦ ಕಿ.ಮಿ. ಕ್ರಮಿಸಬಲ್ಲವು. ಕಂಗಾಯಮ್, ಅಂಬ್ಲಾಚೆರಿ, ಅಮೃತಮಹಲ್, ಹಳ್ಳಿಕಾರ್ ತಳಿಗಳು ಇದಕ್ಕೆ ಉದಾಹರಣೆಗಳು. ಉಭಯೋದ್ದೇಶ ತಳಿಗಳು:ಈ ತಳಿಗಳ ಹಸುಗಳು ಒಂದು ಮಟ್ಟಿಗೆ ಒಳ್ಳೆಯ ಹಾಲು ಉತ್ಪಾದನೆ ಮಾಡುತ್ತವೆ ಮತ್ತು ಗಂಡುಹೋರಿಗಳು ಒಳ್ಳೆಯ ಕೆಲಸಗಾರ ಆಗಿರುತ್ತವೆ. ಹಾಲಿನ ಉತ್ಪಾದನೆ ಪ್ರತಿ ಹಾಲಿನ ಚಕ್ರಕ್ಕೆ ಸುಮಾರು ೧೫೦ ಕೆ.ಜಿ.ಯಿಂದ ೫೦೦ ಕೆ.ಜಿ.ಯಷ್ಟಿರುತ್ತದೆ. ಒಂಗೋಲ್, ಹರಿಯಾಣ, ಕಾಂಕ್ರೇಜ್, ಥಾರ್ ಪಾರ್ಕರ್, ಕೃಷ್ಣಾ, ರಾಟಿ, ಮೇವಟಿ ಇದಕ್ಕೆ ಉದಾಹರಣೆಗಳು. == Resourcesನಲ್ಲಿ ದಾಖಲಾಗಿರುವ ಗೋತಳಿಗಳು == Resourcesನಲ್ಲಿ ೩೯ ಭಾರತೀಯ ಗೋತಳಿಗಳು ದಾಖಲಾಗಿವೆ. (2015). ಅವುಗಳೆಂದರೆ, ಎಮ್ಮೆ ಮತ್ತು ದೇಸೀ ಹಸುಗಳ ಹಾಲಿನಲ್ಲಿ ಮಾತ್ರ ಆರೋಗ್ಯವನ್ನು ಕಾಪಾಡುವ ಎ2 ಎಂಬ ಅಂಶವಿದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಗೊತ್ತಾಗಿದೆ. == ಉಲ್ಲೇಖಗಳು == == ಹೊರಕೊಂಡಿಗಳು == Resourcesನಲ್ಲಿ ದಾಖಲಾಗಿರುವ ಗೋತಳಿಗಳ ಪಟ್ಟಿ 2016-04-07 ವೇಬ್ಯಾಕ್ ಮೆಷಿನ್ ನಲ್ಲಿ. ಚಿತ್ರ 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತ ಸರ್ಕಾರದ ಕೃಷಿ ಸಚಿವಾಲಯದ , & ಜಾಲತಾಣ ಭಾರತರ ಗೋತಳಿಗಳು - ಗೋವನಿತಾಶ್ರಯ ಟ್ರಸ್ಟ್, ಮಂಗಳೂರು ಗುಜರಾತ್ ರಾಜ್ಯದ ಗೋತಳಿಗಳು - 2015-05-12 ವೇಬ್ಯಾಕ್ ಮೆಷಿನ್ ನಲ್ಲಿ. ಗೋವಿಶ್ವಕೋಶ ಜಾಲತಾಣ 2015-06-03 ವೇಬ್ಯಾಕ್ ಮೆಷಿನ್ ನಲ್ಲಿ. , -ನ್ಯೂ ಇಂಡಿಯಲ್ ಎಕ್ಸ್ ಪ್ರೆಸ್ ಪತ್ರಿಕೆ-11th 2014 – -ತೆಹೆಲ್ಕಾ.ಕಾಂ 2015-04-03 ವೇಬ್ಯಾಕ್ ಮೆಷಿನ್ ನಲ್ಲಿ. - -.. 2015-04-21 ವೇಬ್ಯಾಕ್ ಮೆಷಿನ್ ನಲ್ಲಿ. - , - 2016-07-26 ವೇಬ್ಯಾಕ್ ಮೆಷಿನ್ ನಲ್ಲಿ.